Index   ವಚನ - 355    Search  
 
ಬಾಣವ ತಾಕಿದ ಲೆಕ್ಕದಿ, ಕ್ಷೋಣಿ ಮಾರ್ಬಲವನೆಲ್ಲ ಮಡುಹಿದಿ ಲೆಕ್ಕದಿ, ಕಾಣಿಸದ ಕಾಣಿಸುವೆ ಲೆಕ್ಕದಿ, ಕರ್ತನು ಸಿಕ್ಕಲಿ. ಅಣೆಯನಿಡಲು ಚಂದ್ರಸೂರ್ಯದಿಗಳು ಆಜ್ಞಗೆ ನಿಲ್ಲಲು, ನಾಣ್ಯವು ಅವರ ವಚನವೆ ನಾಣ್ಣುಡಿ. ಮಿಕ್ಕವು ಬೋನ ಮದ್ದಳೆಗೆ ಇಕ್ಕಲು, ಬೋನದ ನುಡಿಯೆಂಬರೊ, ಮದ್ದಳೆಯ ನುಡಿಯೆಂಬರೊ? ಪ್ರಾಣಲಿಂಗ ನುಡಿಸಿದ ನುಡಿಗಳು, ಬಾಣವು ತಾಕಿ ತಟ್ಟಿ ಮಚ್ಚು ಹಾಯ್ದಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.