Index   ವಚನ - 361    Search  
 
ಶಬ್ದ ಸಾಹಿತ್ಯದೊಳು ಲಿಂಗವ ಅದ್ವೈತದಲಿ ಕಟ್ಟಿ[ಅರ್ಚಿಸು] ಅಷ್ಟವಿಧಾರ್ಚನೆಯಿಂದಲಿ. ಯದ್ಭಾವಭಕ್ತಿ ಏಕಲಿಂಗನಿಷ್ಠೆ ಪರತ್ವ, ನಿರ್ಧರಿಸಿ ನಿಶ್ಚಯದಲ್ಲಿ ನಿವಾರ್ತವಂ ಪಡೆದಂಗೆ ಶಬ್ದ ನಿಶ್ಯೂನ್ಯಲಿಂಗಾ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.