Index   ವಚನ - 360    Search  
 
ತುರೀಯವ ಕದಲವ ಮನವ ಇದಿರ ಜರಿವ ನಿಂದೆ ಕುಂದೆಗಳು ಬಂಧನವಲ್ಲವು. ಬೆಚ್ಚದೆ ಅವರೊಳು ಮೌನದ ಹಿಡಿದರೆ ಸದಮಲ ಸಂಗನ ಕೃಪೆಗಳು. ಸಫಲವಹುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.