Index   ವಚನ - 369    Search  
 
ಆರುಸ್ಥಲಕೆ ಆರೂಢಲಿಂಗವನು ಇನ್ನು ಬೇರೆ ಅರಸುವರೆ, ಭೇದಾಭೇದ್ಯರು ಮುರುಹಿದ ಮೂಲ್ಯದೊಳಲ್ಲದೆ? ದೋರಣಕುಂಟು ಬಾರಿಯ ಹಣ್ಣಿನೊಳು ಹುಳುವು ತೋರುವುದೆ ತನ್ನ ಬಿಲವ ತೊರೆದು ಮತ್ತೆ? ಜಾರಿಗೆ ಪತಿವ್ರತಾ ಧರ್ಮ ಸೇರುವುದೆ? ತನ್ನಗುಣಕೆ ತಾನೆ ವೆಗ್ಗಳ. ಊರೊಳು ಶರಣ ಉದ್ಭವಿಸಲು ಕಾರಣ ಅಕ್ಕುಲ ದೂರವು ಲೊಕಕ್ಕೆ. ನೀರಹೊಳೆ ಅಗಸರ ಮನೆ ಸೇರಗೊಡದೆ ವರ್ಜಿತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.