Index   ವಚನ - 368    Search  
 
ಷಡುಸ್ಥಲ ಬ್ರಹ್ಮಕ್ಕೆ ಷಡ್ವಿಧ ಸ್ಥಾಪ್ಯ. ಕೊಡುವುದೆ ಖರ್ಗ ತಾ ಕೊಡುವುವರಿಲ್ಲದೆ? ಒಡೆತನ ಅಳೆಂತು, ಅಜ್ಞಾನಕ್ಕೆ ನಡೆಸಿದ ಗುರುತು ಹಿಡಿವನೆ ಪ್ರಾಣಲಿಂಗಸಂಬಂಧಿ ಇಷ್ಟನಷ್ಟವ? ಗುಡಿದೈವ ಗೃಹಲಿಂಗ[ವ]? ಗುಪ್ತದಿ ನಿರುತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.