Index   ವಚನ - 376    Search  
 
ಎಂಬತ್ನಾಲ್ಕು ಡಿಂಭವ ತೊಳಲಿದ ಜೀವನಕೆ ಉಂಬುವ ಆಸೆ, ಉಣ್ಣದ ದೆಸೆ ಎರಡುಂಟು. ಕೊಂಬುವ ಆಹಾರ ಕೊಳ್ಳದ ಆಹಾರ ಎರಡುಂಟು. ಬಂಬುದೇನು ಬಾರದೇನು ಎರಡುಂಟು. ಏಕಾಂಬರ, ಸರ್ವಜೀವನದಯಾಪರಿ, ಏಕೋದೈವ ಬಂಬುದು ಮನುಷ್ಯಜನ್ಮದಲಿ ಅಧಿಕ ವಿಶೇಷ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.