Index   ವಚನ - 381    Search  
 
ಎಳಹೊಟಿ ಬಿಡಿಸಿವುದು ಉಳವಿಯ ಚನ್ನಪ್ರಭುವಿಗಲ್ಲದೆ ಅಳಿವರಿಗೆ ಯಾತಕ್ಕೊ ಎಳಹೊಟಿಯ ಮಾತು? ತಿಳಿವರೆ ಹೇಳಿ, ಅವರ ಎಳಹೊಟಿಯ ಮಾಡುವುರು ಉಂಟೆ? ಕೆಳಗುಂದಿ ಶಿವಚಾರ ಕುಲಾಚಾರ ಎಂದಲ್ಲಿ, ಎತ್ತು ತೊತ್ತಾದರೂ ಬಳಲಿತ್ತು; ಆ ಕಟ್ಟಳೆ ಸಾವಿರ ವರುಷ. ಶಕ್ತಿ ಲಕ್ಷಣಕ್ಕೆ ಇಳೆಯೊಳಗೆ ಬೆಡಗು, ಆರಾರಿಗೂ ಸಿಕ್ಕದ ಮಾತು. ತಳಹುತಾರೆ ತಮ್ಮ ಮನದೊಳು ತಮ್ಮ ತಾವೆ ಸುಳುಹಿನ ಶುಭಸೂಚನೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.