Index   ವಚನ - 15    Search  
 
ಶಿವರುದ್ರಾದಿ ಸಂಜ್ಞೆಯುನುಳ್ಳ ಸ್ಥಲವೊಂದೆಂಬ ಪರತತ್ವ ತಾನೆ ಸೇವ್ಯ ಸೇವಕ ಭಾವದಿಂದ ಎರಡಾಯಿತ್ತು. ಲಿಂಗಸ್ಥಲವೆ ಸೇವ್ಯವಾಗಿ ಅಂಗಸ್ಥಲವೆ ಸೇವಕತ್ವವಾಗಿ ಇರುತ್ತಿಹುದು ತನ್ನಲ್ಲಿ ಲೀನವಾದ ಎಂದೂ ಕೆಡದ ಶಕ್ತಿಯ ಸ್ವಾಭಾವದಿಂದ ಇರುತ್ತಿರಲು ಸಾಕ್ಷಾತ್ ಆ ಪರಶಿವ ತಾನೆ ಉಪಾಸ್ಯತ್ವವನು ಉಪಾಸಕತ್ವವನು ಎಂದೇ ಬಾರಿ ಎಯ್ದುತ್ತಿದ್ದನಯ್ಯ ಶಾಂತವೀರೇಶ್ವರಾ