Index   ವಚನ - 19    Search  
 
ಆ ಮೂಲ ಸ್ಥಲವು ಹೀಂಗೆರಡಾಯಿತ್ತು. ಆ ಸ್ಥಲಗತವಹ ಶಕ್ತಿಯೂ ಎರಡಾಗಿಹುದು. ಆ ಶಕ್ತಿ ಎಂತಹದೆಂದರೆ ತನಗಿದಿರಿಲ್ಲದಿಹ ಸಾಕ್ಷಾತ್ ಶಿವನಲ್ಲಿ ಬೇರಿಲ್ಲದೆ ವರ್ತಿಸುತ್ತಿಹ ಸರ್ವ ಸಾಕ್ಷಿಯಹ ನಿತ್ಯ ಮೂರ್ತಿಯಹ ಸಂಪೂರ್ಣವಹ ತನ್ನಿಂದಧಿಕವೇನೂ ಇಲ್ಲದಿಹ ಮಾಹೇಶ್ವರಿ ತಾನೇ ಶಕ್ತಿಯಯ್ಯ ಶಾಂತವೀರೇಶ್ವರಾ