Index   ವಚನ - 24    Search  
 
ನಿರತಿಶಯವಹ ಪವಿತ್ರವಹ ಅತ್ಯಂತ ಸೂಕ್ಷ್ಮವಹ ಪ್ರಕಾಶವಹ ಪರಿಪೂರ್ಣವಹ ಸಚ್ಚಿದಾನಂದ ರೂಪವೆಂಬ ಹೆಸರುಳ್ಳ ಮುಕ್ತಿ ಫಲಂಗಳ ಕೊಡುವುದು ಭಕ್ತಿಯೆ ಅಯ್ಯ ಶಾಂತವೀರೇಶ್ವರಾ