Index   ವಚನ - 44    Search  
 
ಆವುದಾನೊಂದು ಮಹಾಲಿಂಗವಿದ್ದದ್ದು ಆ ಮಹಾಲಿಂಗವು ಕೋಟಿ ಚಂದ್ರೋಪಮಾನವಾದ ಪರಮ ಶಾಂತಸ್ವರೂಪವಾದಂಥ ಮುಪ್ಪಿಲ್ಲದಂಥ ಭಯರಹಿತವಾದಂಥ ಮೋಕ್ಷ ಸ್ವರೂಪವಾದಂಥ ಚಂದ್ರ ಸೂರ್ಯಾಗ್ನಿ ತಟಿತ್ಕೋಟಿ ತೇಜಸ್ಸುಗಳಿಗೆ ತೇಜಸ್ಸಾಗಿದ್ದಂಥ ಪರತತ್ವವು ಸದ್ರೂಪದಿಂದೆ ವಿಲಾಸವನೆಯಿದುದಾಗಿ ಗೋಳಾಕಾರ ಲಿಂಗವಾಗಿ ಚಿನ್ಮಯವಾಗಿ ಸರ್ವತತ್ವಂಗಳಿಗೆ ಆಶ್ರಯವಾಗಿ ಲಿಂಗಾಕಾರದಿಂದೆ ಪ್ರವರ್ತಿಸುತ್ತಿಹುದು ಮಹಾಲಿಂಗವಯ್ಯ ಶಾಂತವೀರೇಶ್ವರಾ