Index   ವಚನ - 45    Search  
 
ಜನನ ಮರಣವಿಲ್ಲದುದಾಗಿ ನಿರ್ಮಲವಾದುದಾಗಿ ಸರ್ವವ್ಯಾಪಿಯಾಗಿ ಅದ್ವಿತೀಯವಾಗಿ ಅಣುವಿಂದೆ ಅಣುವಾಗಿ ಪರದಿಂದೆ ಪರವಾಗಿ ಸಂಸಾರವ್ಯಾಧಿ ಇಲ್ಲದುದಾಗಿ ತಿಳಿಯಲಶಕ್ಯವಲ್ಲದುದಾಗಿ ಭಾವ ಒಂದರಿಂದ ಅರಿಯಲ್ತಕ್ಕುದಾಗಿ ಚೈತನ್ಯ ಸ್ವರೂಪವಾದ ಶಿವತತ್ವವನು ಚಿತ್ತೆಂಬ ಶಕ್ತಿಯ ಲೇಸಾದ ಸ್ಪರುಣವೆ ರೂಢವಾಗಿಯುಳ್ಳ ಮಹಾಲಿಂಗವೆಂದು ಹೇಳುವರು ಶಾಂತವೀರೇಶ್ವರಾ