ಪಂಚಶಕ್ತಿಯನು ಪಂಚ ಸಾದಾಖ್ಯವನು
ಪಂಚ ಕಲೆಗಳನು ಪಂಚಾಕ್ಷರಗಳನು ಪಂಚ ಭೂತಾತ್ಮವನು
ತನ್ನ ಲಿಂಗ ಗರ್ಭಿಕರಿಸಿಕೊಂಡು ತಾನು ಚಿತ್ಬ್ರಹ್ಮಾಂಡತ್ಮಕನಾಗಿ
ಮಹಾಲಿಂಗವೆಂದುಂಟು, ಅದು ಎಂಥಾದೆಂದರೆ,
ಸ್ವರಾಕ್ಷರ ವಿಕಲಾಕ್ಷರ ವ್ಯಾಪಕಾಕ್ಷರವೆಂದು ಮೂರು ಪ್ರಕಾರ.
ಸ್ವರಾಕ್ಷರವೆಲ್ಲಾ ನಾದ ಸಂಬಂಧ, ವಿಕಲಾಕ್ಷರವೆಲ್ಲಾ ಬಿಂದು ಸಂಬಂಧ,
ವ್ಯಾಪಕಾಕ್ಷರವೆಲ್ಲಾ ಕಲಾ ಸಂಬಂಧ
ನಾದವೆ ‘ಅ’ಕಾರ. ಬಿಂದುವೆ ‘ಉ’ಕಾರ. ಕಲೆಯೆ ‘ಮ’ ಕಾರ,
ಈ ನಾದ ಬಿಂದು ಕಳೆಗಳ ಗರ್ಭಿರಿಸಿಕೊಂಡಿರರ್ಪುದು
ಚಿತ್ರಣವ ಸ್ವರೂಪವೆ ಅದ್ವೈತಾನಂದದಿಂದ ಸಂಪೂರ್ಣವನುಳ್ಳ
ಆದಿ ಮಹಾಲಿಂಗವಯ್ಯ ಶಾಂತವೀರೇಶ್ವರಾ