ವೀರಶೈವರಿಗೆ ಶಾಸ್ತ್ರವಾಯಿತ್ತಾದೊಡೆ
ಸ್ಥಲಂಗಳ ಭೇದದ ದೆಸೆಯಿಂದ
ಸ್ಥಲೋಕ್ತವಾದ ಸದಾಚಾರ ಭೇದದ ಸಂಬಂಧದ ದೆಸೆಯಿಂದ
ಸ್ಥಲದಲ್ಲಿರಿತ್ತಿರ್ದ ಭಕ್ತದ್ಯಧಿಕಾರಿಗಳ ಭೇದದ ದೆಸೆಯಿಂದವು
ಆರು ಪ್ರಕಾರವಾಗಿರ್ದುದು.
ಈ ತಾತ್ಪರ್ಯ ಶಾಸ್ತ್ರಕ್ಕೆ ವೀರಶೈವಧರ್ಮನಿಷ್ಠನಾಗಿ
ಮುಮುಕ್ಷುವಾದ ಭಕ್ತನೆ ಅಧಿಕಾರಿ.
ಶಿವಭಕ್ತಿಯಿಂದೆ ಪಡೆಯುವ ಶಿವೈಕ್ಯ ರೂಪವಾದ
ಪರ ಮುಕ್ತಿಯೆ ಪ್ರಯೋಜನ.
ಏಕೋತ್ತರ ಶತಸ್ಥಲ ಪ್ರತಿಪಾದ್ಯ ಜ್ಞಾನವೆ ಈ ವಿಷಯ-
ಈ ವಿಷಯಕ್ಕೆ ವೀರಶೈವ ಸಿದ್ಧಾಂತ ಶಾಸ್ತ್ರದೊಡನೆ ಕೂಡಿ ವಿಷಯಾವಿಷಯ
ಭಾವವೇ ಸಂಬಂಧಂ
ಈ ಅನುಬಂಧಚತುಷ್ಪಯವುಳ್ಳುದೆ ಶಾಸ್ತ್ರವೆಂಬುದರ್ಥವಯ್ಯ
ಶಾಂತವೀರೇಶ್ವರಾ
ಸೂತ್ರ: ಇನ್ನು ಮುಂದೆ ಮುಕ್ತಭೇದಮಂ ಪೇಳುತಿರ್ದಪನದಂತೆನೆ, “ಮುಕ್ತಾಶ್ಚಾಪಿ ತ್ರಿವಿಧಾಜ್ಞಾನಯೋಃ” ಎಂದು ಜೀವನ್ಮುಕ್ತನು, ಅಪರ ಮುಕ್ತನು, ಪರಮುಕ್ತನೆಂದು ಮೂರು ಪ್ರಕಾರವಾಗಿ ಅರಿಯುವನು.