ಅನಾದಿ ಭಕ್ತನ ಹೃದಯಲ್ಲಿ ಅನಾದಿ ಲಿಂಗವಿಹುದು,
ಆ ಅನಾದಿ ಜಂಗಮದ ಮುಕುಟದಲ್ಲಿ ಶೂನ್ಯಲಿಂಗವು ಹುಟ್ಟಿತ್ತು.
ಆ ಶೂನ್ಯ ಲಿಂಗದಿಂದ ಚಿದಾಕಾಶ ಹುಟ್ಟಿತ್ತು,
ಆ ಚಿದಾಕಾಶದಿಂದ ಚಿಚ್ಛಕ್ತಿ ಹುಟ್ಟಿತ್ತು,
ಆ ಚಿಚ್ಛಕ್ತಿಯಿಂದ ಪರಾಶಕ್ತಿ ಹುಟ್ಟಿತ್ತು,
ಆ ಪರಾಶಕ್ತಿಯಿಂದ ಆದಿಶಕ್ತಿ ಹುಟ್ಟಿತ್ತು,
ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಹುಟ್ಟಿತ್ತು,
ಆ ಇಚ್ಛಶಕ್ತಿಯಿಂದ ಜ್ಞಾನಶಕ್ತಿ ಹುಟ್ಟಿತ್ತು,
ಆ ಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಹುಟ್ಟಿತ್ತು,
[ಆ ಕ್ರಿಯಾಶಕ್ತಿಯಿಂದ ಶೂನ್ಯಲಿಂಗ ಹುಟ್ಟಿತ್ತು]
ಆ ಶೂನ್ಯಲಿಂಗದಂತರಂಗದಲ್ಲಿ ನಿಃಕಲಲಿಂಗ ಹುಟ್ಟಿತ್ತು
ಆ ನಿಃಕಲ ಲಿಂಗದಂತರಂಗದ ಮಧ್ಯದಲ್ಲಿ
ಸರ್ವಾಧಾರವಾದ ಮಹಾಲಿಂಗ ಹುಟ್ಟಿತ್ತು,
ಆ ಮಹಾಲಿಂಗದಿಂದ ಪರಶಕ್ತಿ ಹುಟ್ಟಿತ್ತು,
ಮೂಲಮಂತ್ರ ಸ್ವರೂಪವಾದ ಪರಶಕ್ತಿ ಎಂಬ ಹೆಸರುಳ್ಳ
ವಿಶ್ವಕ್ಕೆ ಮೂಲಸ್ತಂಭವಾದ ಪರಶಿವಲಿಂಗಕ್ಕೆ ನಮಸ್ಕಾರವಯ್ಯ
[ಶಾಂತವೀರೇಶ್ವರಾ]
Art
Manuscript
Music
Courtesy:
Transliteration
Anādi bhaktana hr̥dayalli anādi liṅgavihudu,
ā anādi jaṅgamada mukuṭadalli śūn'yaliṅgavu huṭṭittu.
Ā śūn'ya liṅgadinda cidākāśa huṭṭittu,
ā cidākāśadinda cicchakti huṭṭittu,
ā cicchaktiyinda parāśakti huṭṭittu,
ā parāśaktiyinda ādiśakti huṭṭittu,
ā ādiśaktiyinda icchāśakti huṭṭittu,
ā icchaśaktiyinda jñānaśakti huṭṭittu,
ā jñānaśaktiyinda kriyāśakti huṭṭittu,
[ā kriyāśaktiyinda śūn'yaliṅga huṭṭittu]
Ā śūn'yaliṅgadantaraṅgadalli niḥkalaliṅga huṭṭittu
ā niḥkala liṅgadantaraṅgada madhyadalli
sarvādhāravāda mahāliṅga huṭṭittu,
ā mahāliṅgadinda paraśakti huṭṭittu,
mūlamantra svarūpavāda paraśakti emba hesaruḷḷa
viśvakke mūlastambhavāda paraśivaliṅgakke namaskāravayya
[śāntavīrēśvarā]