Index   ವಚನ - 76    Search  
 
ಅನೇಕ ಜನ್ಮಗಳಿಂದ ಮಾಡಲಾದ ಪುಣ್ಯಕರ್ಮದಿಂದ ಮನೋವಾಕ್ಕಾಯಗಳಿಂದ ಹುಟ್ಟಿದ ಪಾಪ ಸಮೂಹವು ಶಿವಭಕ್ತಿಯಿಂ ಕೆಡುತ್ತಿರಲಾಗಿ ನಿರ್ಮಲಾಂತಃಕರಣಗಳುಳ್ಳ ಅತ್ಮನನ್ನು ಪಿಂಡ ಶಬ್ದದಿಂದ ಹೇಳುವರು. ಇದು ಪಿಂಡಸ್ಥಲ, ಮುಂದೆ ಪಿಂಡಜ್ಞಾನಾದಿ ಶತಸ್ಥಲಂಗಳೆ ಸಾಧನಗಳು. ಅದು ಕಾರಣವಾಗಿ ದೃಷ್ಟಿ ಎರಡಾದರೂ ದರ್ಶನ ಒಂದು, ಪಕ್ಷವೆರಡಾದರೆ ಗಮನ ಒಂದೆಂದು ಹಾಂಗೆಯೇ ‘ಅತ್ಮ ಲಾಭಾನ್ನರೋ ವಿದ್ಯತೇ! ನಾತ್ಮಃ ಪರದೇವತಾ’ ಎಂಬ ವೇದಾಗಮಗಳಿಂದೇಕ ವಿಧವಾಗಿ ಪ್ರತಿಪಾದಿತ ಸ್ಥಲವನು ಗುರೂಪದೇಶ ಸ್ವಾನುಭಾವಗಳಿಂದೆ ಏಕವಾಗಿ ತಿಳಿವುದು. ಸಾಕ್ಷಿ:”ಬಹುಜನ್ಮ ಕೃತೈಃ| ಪುಣ್ಯೇಪ್ರಕ್ಷಿಣೆ ಪಾಪಪಂಜರೆ ಶುದ್ಧಾಂತಃಕರಣಾದೇಹಿ| ಪಿಂಡಶಬ್ಚೇನ ಗೀಯತೆ” ಎಂದುದಾಗಿ ಶಾಂತವೀರೇಶ್ವರಾ ಸೂತ್ರ: ಬಳಿಕ ಪಿಂಡವೆಂಬ ನಾಮ ಉಳ್ಳಾತನನು ತೋರಿಸುತಿರ್ದಪಂ.