Index   ವಚನ - 77    Search  
 
ಪರಮೇಶ್ವರಸಂಕಲ್ಪ ಕರ್ತೃತ್ವದಿಂದಲಾದ ಈ ಸೃಷ್ಟಿಯಲ್ಲಿ ಸದ್ವಾಸ ನಾತ್ಮಕವಾದ ಶಕ್ತಿಪಾತಕ್ಕೆ ಸಮೀಪವಾದ ಕಡೆಯ ದೇಹ ಭಾವವುಳ್ಳವನಾನೊಬ್ಬನುಂಟು, ಅವನು ಪಿಂಡ ಸಕೀಲದಿಂದ ಹೇಳುವನು. ಸಾಕ್ಷಿ: “ಪರಮೇಶ್ವರ ಸಂಕಲ್ಪ | ದೃಷ್ಟ ಸದ್ವಾಸನಾತ್ಮಕ ಚರಮೋದೇಹ ಭಾವೋಯಃ|| ಪಿಂಡ ಶಬ್ದೇನ ಗೀಯತೇ” ಎಂದುದಾಗಿ ಶಾಂತವೀರೇಶ್ವರ ಸೂತ್ರ:ಈಯಾತ್ಮನು ಶಿವಶಕ್ತ್ಯಾತ್ಮಕವಾದ ಜಗತ್ತಿನಲ್ಲಿ ಶಿವನೋ ಶಿವಾನ್ಯನೋ ಎಂದು ಶಂಕೆಯಾಗಲು ಶಿವಾನ್ಯನೆಂದು ಹೇಳುತಿರ್ದಪಂ.