Index   ವಚನ - 78    Search  
 
‘ಸತ್ಯ ಜ್ಞಾನಮನಂತಂ ಬ್ರಹ್ಮ’ ಎಂಬ ಶ್ರುತಿಯುಂಟಾಗಿ ಸತ್ತು ಚಿತ್ತಾನಂದವೇ ಸ್ವರೂಪವಾಗುಳ್ಳ ವ್ಯಾಪಕವಾದ ವಿಕಲ್ಪ ರಹಿತನಾದ ಅಕಾರವಿಲ್ಲದ ಗುಣತ್ರಯ ರಹಿತನಾದ ಮಾಯಾ ಪ್ರಪಂಚ ರಹಿತನಾದ ‘ಶಿವ ಏಕ ಏವ ಶಿವ ಏಕೋಧ್ಯೇಯ ಶಿವಶಂಕರ ಸರ್ವಮನ್ಯತ್ವರಿತ್ಯಜ್ಯ ಸಮಾಪ್ತಾ ಧರ್ಮ ಶಿಖಾ’ ಎಂದು ಪ್ರಸಿದ್ಧವಾದ ಪರಮ ಶಿವನೋರ್ವನುಂಟು. “ಜೀವ ಸಂಜ್ಞಾಕಾಃ ಜನ್ಮಾದಿ ಸಂಯುಕ್ತಾಸ್ಸಂಸಾರ ದುಃಖ ನಿಮಗ್ನಾಃ! ಸ್ವಕೃತ ಸುಕೃತ ದುಃಕೃತ ಕರ್ಮಣಾ ಪರಮೇಶ್ವರ ಪ್ರೇರಣಾಯಾ ಶಬ್ದವಾ ಸಂಸಾರಿಣಾ ಜೀವಾ” ಎಂದು ‘ವೃದ್ದ ಜಾಬಾಲೋಪನಿಷತ್ಪ್ರ’ಸಿದ್ಧವಾಗಿ ಜೀವಾತ್ಮ ಸಂಜ್ಞೆಯುಳ್ಳ ಪಿಂಡವಾಚ್ಯರು ‘ಅನ್ಯದ್ಯಾ ವಿದ್ಯಾ ಸಂಬಂಧಾತ್’ ಅನಾದಿಯಾದ ವಿದ್ಯಾ ಸಂಬಂಧ ದೆಸೆಯಿಂದ. ಚಿದಾನಂದಮಯನಾದ ಶಿವನು ಸತ್ಕ್ರಿಯಾ ಸ್ವರೂಪಾಂಶ ಉಳ್ಳವರಾಗಿ ‘ದೇವತಿರ್ಯಕ್ಮಾನುಷ ಜಾತಿ ಭೇದೇ ದೇವಾಃ ಷೋಡಶ ಲಕ್ಷಾಣಿ ಮಾನುಷಾಃ ದಶಬಿರ್ದ್ಧಶಭಿಸ್ತದ್ವ! ಜ್ವಲಜಾ ವಿಹಗಾ ಮೃಗಾಃ ಸರಿಸೃಪಾಸ್ತುಲಕ್ಷಾಣಿ ಸಪ್ತಜನ್ಮಾನ್ಯ ಮಾನಿ ವೈ’ ಎಂಬ ‘ಸ್ಕಂದ’ ವಾಕ್ಯ ಉಂಟಾಗಿ; ದೇವತಿರ್ಯಕ್ಯಾನುಷ ಜಾತಿ ಭೇದದಲ್ಲಿ ಇರುತ್ತಿರುವುರು. ಆ ಪಿಂಡ ಶಬ್ದ ವಾಚ್ಯರಾದ ಜೀವರುಗಳ ಹೃದಯ ಕಮಲದಲ್ಲಿ ‘ವಾ ಮಾಯಿವ ಮಾಹೇಶ್ವರಃ ಮಾಯಾಂತು ಪ್ರಕೃತಿಂ ವಿದ್ಯಾನ್ಮಾಯಿನಂ ತಾ ಮಹೇಶ್ವರ’ ಎಂದು ‘ಶ್ವೇತಾಶ್ವತ’ ಶ್ರುತಿ ಪ್ರಸಿದ್ಧವಾಗಿ ಮಾಯಾಶಕ್ತಿಯುಳ್ಳ ಪರಮೇಶ್ವರನು ಪ್ರೇರಕನಾಗಿ ಇರುತ್ತಿರುವನು. ‘ದಿಯೋಯೇನಃ ಪ್ರಚೋದಯಾತ್’ ಎಂದು ಮಂತ್ರವಾಕ್ಯ ಉಂಟಾಗಿ ಪ್ರೇರ್ಯ ಪ್ರೇರಣರಾದ ಜೀವೇಶ್ವರರನು ನಿಶ್ಚಯಿಸೂದಯ್ಯ ಶಾಂತವೀರೇಶ್ವರಾ ಸೂತ್ರ: ‘ಪಿಂಡಂ’ ‘ಶರೀರಂ’