Index   ವಚನ - 79    Search  
 
ಪಿಂಡ ಎಂದರೆ ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವು, ಮತ್ತಂ ’ದೃಶ್ಯಂ ಶರೀರಂ’ ಕಾಣುವ ಸ್ಥೂಲ ಸೂಕ್ಷ ಕಾರಣವೆಂಬ ಶರೀರತ್ರಯ, ‘ಪಿಂಡಂ ತ್ರಿವಿಧಂ’ ಘಟಾಕಾಶ ಚಿದಾಕಾಶ ಮಹದಾಕಾಶತ್ರಯವು. ಸಾಕ್ಷಿ: “ಘಟಕಾಶಂ ಚಿದಾಕಾಶಂ ಮಹದಾಕಾಶಮಿತಿ ತ್ರಯಂ ದ್ವಾಭ್ಯಾಂ ವಿದ್ಯುಕ್ತರಂ| ಶೂನ್ಯಂ ಮಹದಾಕಾಶಂ ಮರಾಂಗನೆ” ಎಂಬುದಾಗಿ ಘಟಾಕಾಶವೆಂದರೆ ಸ್ಥೂಲತನು, ಚಿದಾಕಾಶವೆಂದರೆ ಸೂಕ್ಷ್ಮತನು, ಮಹದಾಕಾಶವೆಂದರೆ ಕಾರಣತನು. ‘ಅಸಮಂತಾತ್ ಆಕಾಶತೀತಕಾಶ’ ಎಂದು ಪುಲ್ಲಿಂಗವಲ್ಲದೆ ನಪುಂಸಕಲಿಂಗವಲ್ಲ; ‘ಪಿಂಡ’ ಶಬ್ದಕ್ಕೆ ವಿಶೇಷಣವಾಗಿ ‘ಆಕಾಶಂ’ ಎಂದು ನಪುಂಸಕಲಿಂಗವಾಯಿತ್ತು. ಘಟಾಕಾಶ ಸ್ವರೂಪವಾದ ಸ್ಥೂಲತನುವಿನಲ್ಲಿ ಕ್ರಿಯಾ ಪ್ರಕಾಶವಾದ ಇಷ್ಟವಾಗಿ; ಚಿದಾಕಾಶ ಸ್ವರೂಪವಾದ ಸೂಕ್ಷ್ಮ ತನುವಿನಲ್ಲಿ ಜ್ಞಾನ ಸ್ವರೂಪವಾದ ಪ್ರಾಣಲಿಂಗವಾಗಿ ಮಹದಾಕಾಶ ಸ್ವರೂಪವಾದ ಕಾರಣ ತನುವಿನಲ್ಲಿ ಭಾವಪ್ರಕಾಶವಾದ ತೃಪ್ತಲಿಂಗವಾಗಿ ಪಿಂಡಸ್ಥಲ ಪರಮಾತ್ಮನು ಪ್ರಕಾಶಿಸುತ್ತಿಹನಾಗಿ ‘ಪಿಂಡಸ್ಥಲ’ವೆಂಬ ನಾಮವಾಯಿತ್ತಯ್ಯ ಶಾಂತವೀರೇಶ್ವರಾ