Index   ವಚನ - 80    Search  
 
ಅದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು ಮೂರು ಪ್ರಕಾರವಾಗಿಪ್ಪುದು. ಅದಿಪಿಂಡವ ಜೀವಪಿಂಡ, ಮಧ್ಯಪಿಂಡವೆ ಸುಜ್ಞಾನಪಿಂಡ, ಅನಾದಿಪಿಂಡವೆ ಚಿತ್ಪಿಂಡ. ಜೀವಪಿಂಡ ಪಿಂಡವೆಂದು ಅಷ್ಟಮೂರ್ತಿಗಳೆಂದು ಉತ್ಪತ್ತಿಯಾದವು. ಅಂದಿಂದ ಭವ ಭವಗಳೊಳಗೆ ಬಂದು ಶಿವ ಕೃಪೆಯಿಂದ ಭವಕಲ್ಪಿತ ತೀರಿ ಗುರೂಪದೇಶದಿಂದ ಪ್ರಕೃತಿ ಕಾಯವಳಿದು ನಿತ್ಯಾನಿತ್ಯ ವಿವೇಕವನರಿದು ಷಟ್ ಸ್ಥಲಜ್ಞಾನದಿಂದ ಆಚರಿಸ, ಪಿಪೀಲಿಕಾ ಜ್ಞಾನವುಳ್ಳ ಜೀವನ್ಮುಕ್ತರಾದ ನೂತನ ಪುರಾತನರು ಧರಿಸಿದ ಮಂತ್ರಪಿಂಡವೆ ಜೀವ ಪಿಂಡವು, ಶಿವಾಜ್ಞೆಯಿಂದ ಚಿತ್ತನ ವಂಶವೆ ಸಾಕಾರವಾಗಿ ಜಗದ್ಹಿತಾರ್ಥವಾಗಿ ಮರ್ತ್ಯಲೋಕದಲ್ಲಿ ಉದಯವಾಗಿ ಶರೀರ ಸಂಬಂಧಗಳಾಗಿಯಾ ಶರೀರದ ಗುಣ ಧರ್ಮಂಗಳ ಹೊದ್ದಿಯೂ ಹೊದ್ದದ ಹಿಡಿದ ಶೀಲವ್ರತಾದಿಗಳನು ಬಿಡದ ಮರ್ಕಟಜ್ಞಾನವುಳ್ಳ ಬಸವಾದಿ ಪ್ರಮಥರು ಧರಿಸಿದ ಪಿಂಡವೆ ಸುಜ್ಞಾನ ಪಿಂಡವೆಂದು, ಚಿನ್ನ ಬಣ್ಣದ ಹಾಂಗೆ ಶಿವತತ್ವವ ಬಿಟ್ಟು ಅಗಲದೆ ಇದ್ದಂತ ವಿಹಂಗಜ್ಞಾನಾದಿಗಳ ನೂರೊಂದು ವಿರಕ್ತರು ಧರಿಸಿದ ಪಿಂ ಡವೆ ಚಿತ್ಪಿಂಡವಯ್ಯ ಶಾಂತವೀರೇಶ್ವರಾ