ಚಂದ್ರಕಾತದಲ್ಲಿ ಉದಕವು ಹೇಂಗೆ ಪ್ರಸಿದ್ಧವು
ಸೂರ್ಯಕಾಂತದಲ್ಲಿ ಅಗ್ನಿ ಹೇಂಗೆ ಸಿದ್ಧವು
ಬೀಜದಲ್ಲಿ ಮೊಳಕೆ ಹೇಂಗೆ ಸಿದ್ಧವು
ಆ ಪ್ರಕಾರದಿಂದೆ ಪಿಂಡ ಶಬ್ದ ವಾಚ್ಯನಾದ ಜೀವಾತ್ಮನಲ್ಲಿ
ಪ್ರೇಕನಾದ ಮಹೇಶ್ವರನು ಇರುತಿರ್ದನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Candrakātadalli udakavu hēṅge prasid'dhavu
sūryakāntadalli agni hēṅge sid'dhavu
bījadalli moḷake hēṅge sid'dhavu
ā prakāradinde piṇḍa śabda vācyanāda jīvātmanalli
prēkanāda mahēśvaranu irutirdanayya
śāntavīrēśvarā