Index   ವಚನ - 82    Search  
 
ಸೂರ್ಯನಲ್ಲಿ ಬಿಂಬ ಪ್ರತಿಬಿಂಬವು ಹೇಂಗೆ ಪ್ರಕಾಶವೋ ಆ ಪ್ರಕಾರದಿಂದ ಒಂದೆಯಾಗಿರ್ದ ಪರಶಿವ ಪರಬ್ರಹ್ಮ ಮಹಾಲಿಂಗವೆಂಬ ಸೂರ್ಯ ನಾಮವುಳ್ಳ ವಸ್ತುವಿನಲಿ ಜೀವೇಶ್ವರ ಸ್ವರೂಪವು ಸಮರ್ಥಿಸಲಾಗಿತ್ತು, ಶುದ್ಧವಾದ ಸತ್ವ ಗುಣೋಪಾದಿಯುಳ್ಳ ಪರಮೇಶ್ವರನೆ ಈ ಜಗಜ್ಜಾಲದಲಿ ಪ್ರೇರಕನಾಗಿ ಹೇಳಲಾಗಿತ್ತು. ಸತ್ವ ರಜಸ್ತಮೋ ಗುಣ ರೂಪವಾದ ಮಿಶ್ರೋಪಾಧಿಯೊಡನೆ ವರ್ತಿಸುತಿರ್ದ ಸಮಸ್ತಾತ್ಮರು ಪಶುಗಳೆಂದು ನೆನೆವರು. ಕೇವಲ ತಮೋಗುಣ ರೂಪವುಳ್ಳ ಪ್ರಕೃತಿ ತತ್ತ್ವವು ವಸ್ತುವೆಂದು ಹೇಳಲಾಗಿತ್ತು. ಪ್ರೇರಕನಾದ ಪರಮೇಶ್ವರನೆ ಸರ್ವಜ್ಞನೆಂದು ಹೇಳುತ್ತಿರುವುರು. ಆತ್ಮನು ಕಿಂಚಿಜ್ಞನೆಂದು ಹೇಳುವರು ಅತ್ಯಂತ ಗೋಪ್ಯವಾದ ಚೈತನ್ಯವು ಜಡವಸ್ತುವು ಪ್ರಕೃತಿ ತತ್ತ್ವವೆಂದು ಹೇಳುವರು. ಮರಳಿ ಶಿವ ಜೀವರೆಂಬ ನಾಮೋಪಾದಿಯು ಶುದ್ಧಾಶುಧ್ಧದ ಭೇದದ ದೆಸೆಯಿಂದ ಹೇಳುವರು. ತನ್ನಾಶ್ರಯಿಸಿದವರಿಗೆ ಮೋಹವನ್ನು ಮಾಡದೆ ಇರ್ದ ಮಹಾಮಾಯೆಯೆ ಶುದ್ಧೋಪಾದಿಯು ತನ್ನನಾಶ್ರಸಿದಿದವರ ಮೋಹಿಸುತಿರ್ದ ಅಧೋ ಮಾಯೆಯು. ಅಶುದ್ಧೋಪಾದಿಯಯ್ಯ. ಶ್ರುತಿ ತಂತ್ರ ವಿರಹಿತಾದ ಶುದ್ಧ ಕರ್ಮಂಗಳ ಪರಿಪಾಕದ ದೆಸೆಯಿಂದ ನಿರ್ಮಲವಾದಂತಃಕರಣವುಳ್ಳ ಜೀವಾತ್ಮನಲಿ ವ್ಯಕ್ತವಾದ ಶಿವಸಂಬಂಧವಾದ ಭಕ್ತಿಯು ಶಿವಕೃಪಾದ ದೆಸೆಯಿಂದ ಹುಟ್ಟುತ್ತಿರುವುದು. ಈ ಜೀವಾತ್ಮನು ‘ಅಂತ್ಯ ಶರೀರಸ್ಯಾತ್ ತದಸ್ಯ ತೃತೀಯ ಜನ್ಮ’ ಎಂಬ ಶ್ರುತಿಯುಂಟಾಗಿ ಚರಮ ದೇಹವುಳ್ಳಾತನಾಗುತಲು ಪಿಂಡ ಶಬ್ದದಿಂದ ಹೇಳಲು ಯೋಗ್ಯನಯ್ಯ ಶಾಂತವೀರೇಶ್ವರಾ ಅಂತು ಪಿಂಡಸ್ಥಲ ಪೂರ್ವೋಕ್ತ ಸ್ಥಲಂಗಳಿಗೆ ಗಣನೆ 62ಕ್ಕೆ ಮಂಗಳಮಸ್ತು. ಪಿಂಡಜ್ಞಾನಸ್ಥಲ ಗ್ರಂಥ: “ಸೂಚನಾತ್ಸೊತ್ರಮಿತ್ಯಾಹುಃ| ಸೂತ್ರಂ ನಾಮಪರಂ ಪದಂ| ತತ್ಸೊತ್ರಂ ವಿದಿತಂಯೇನ ಸವಿಪ್ರೋ ವೇದಪಾರಗಣ||” -ಬ್ರಹ್ಮೋಪನಿಷತ್ತು. ಸಂಜ್ಞೆಯ ದೆಸೆಯಿಂದ ಸೂತ್ರವೆಂದರೆ ಪರಬ್ರಹ್ಮದ ಅಭಿಧಾನ. ಆ ಸೂತ್ರಭಿಧನಾವುಳ್ಳ ಬ್ರಹ್ಮನನ್ನು ಆವನು ತಿಳಿದಯತ್ತಾನೆಯೊ ಆ ವಿಪ್ರನೆ ವೇದ ಪಾರಂಗತನೆಂದು ತಿಳಿವುದು. ಈ ಪ್ರಕಾರವಾದ ಪರಬ್ರಹ್ಮವು ತನ್ನ ವ್ಯವಹಾರವಾದ ಅಂಗತತ್ವ ಲಿಂಗತತ್ವವನು ತೋರಲು ಆವುದಾನೊಂದು ಇಚ್ಚೆಯಿಂದ ಪಿಂಡರೂಪವಾದ ಅತ್ಮನಲ್ಲಿ ಜ್ಞಾನ ಹುಟ್ಟಿತ್ತು. ಅದೇ ಪಿಂಡಜ್ಞಾನವೆಂದು ಹೇಳಲಾಗುವುದು.