ಎಲ್ಲ ಕಡೆಯಲ್ಲಿಯೂ ವಿಸ್ತರಿಸಲಾದ ಜ್ಞಾನದೃಷ್ಠಿಯು
ಮೆಲ್ಲ ಮೆಲ್ಲನೆ ಪ್ರತ್ಯಕ್ಷನಾಗಿ
ಪರತತ್ವವೆಂಬ ನಿರ್ಮಲವಾದ ಕನ್ನಡಿಯಲ್ಲಿ
ತನ್ನನ್ನು ತನ್ನಿಂದವೆ ಕಾಣುತ್ತಿಹುದು.
ತನ್ನ ಸ್ವರೂಪವನರಿಯುವಂಥ ಸಮ್ಯಜ್ಞಾನವ
ತನಗೆ ಪರಶಿವನು ಪ್ರಕಾಶವ ಮಾಡಲಾಗಿ
ಬಳಿಕಾ ಜ್ಞಾನಸಂಬಂಧವಪ್ಪ ಪರಶಿವನೊಡನೆ ಅವಿರಳ ಭಾವದಿಂದ ತನ್ನ
ಸ್ವರೂಪವ ತಾನೆ ಅರವೆನೆಂದು ಭಾವ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ella kaḍeyalliyū vistarisalāda jñānadr̥ṣṭhiyu
mella mellane pratyakṣanāgi
paratatvavemba nirmalavāda kannaḍiyalli
tannannu tannindave kāṇuttihudu.
Tanna svarūpavanariyuvantha samyajñānava
tanage paraśivanu prakāśava māḍalāgi
baḷikā jñānasambandhavappa paraśivanoḍane aviraḷa bhāvadinda tanna
svarūpava tāne aravenendu bhāva
śāntavīrēśvarā