ಉತ್ಕೃಷ್ಟವಾದ ಜ್ಞಾನವೆಂಬ ನೇತ್ರವನು ತೆರೆದು
ಅಗ್ನಿಯ ಪಟುವ ಮಾಡಿ ಮಾಯಾ ಕಾಳಿಕೆಯನು ಕೆಡಿಸುವುದು.
ಚಲನವಿಲ್ಲದ ಕಲೆಗಳನು ಮೀರಿದ ಶಾಂತವಾದ
ಆ ಬ್ರಹ್ಮವೆ ನಾನೆಂದು ನೆನೆವುದು.
ಪರಮಾತ್ಮನೆಂಬ ಸೂರ್ಯನು ಬೆಳಗುತ್ತಿರಲು
ಸಕಲವಾದ ಅಜ್ಞಾನಾಂಧಕಾರವು ಕೆಡುವುದು.
ಜ್ಞಾನಿಗಳು ಮಲತ್ರಯ ರಹಿತವಾದ ಶಿವಜ್ಞಾನ ಯೋಗದಿಂದ
ಲೋಕ ಪ್ರಪಂಚವನು ಒಂದಿಷ್ಟು ಕಾಣರು;
ಇಂತೆಂದು ‘ಅಮೃತನಾದೋಪನಿಷತ್ತಿ’ನಲ್ಲಿ
‘ನಂದೀಶ್ವರ ತಾರಾವಳಿ’ಯಲ್ಲಿ ಹೇಳಿರುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Utkr̥ṣṭavāda jñānavemba nētravanu teredu
agniya paṭuva māḍi māyā kāḷikeyanu keḍisuvudu.
Calanavillada kalegaḷanu mīrida śāntavāda
ā brahmave nānendu nenevudu.
Paramātmanemba sūryanu beḷaguttiralu
sakalavāda ajñānāndhakāravu keḍuvudu.
Jñānigaḷu malatraya rahitavāda śivajñāna yōgadinda
lōka prapan̄cavanu ondiṣṭu kāṇaru;
intendu ‘amr̥tanādōpaniṣatti’nalli
‘nandīśvara tārāvaḷi’yalli hēḷiruvudayya
śāntavīrēśvarā