Index   ವಚನ - 85    Search  
 
ಜೀವನೆ ಶಿವನು, ಶಿವನೆ ಜೀವನು, ಆ ಜೀವನೆ ಕೇವಲ ಶಿವನು. ಜೀವನು ಪಾಶಬದ್ಧನಹನು ಪಾಶದಿಂದ ಮುಕ್ತನು ಸದಾಶಿವನು. ಸತ್ಪಿರುಷರ ಜನನ ಮರಣದಿಂದ’ ಸಂಕಟವು ಹೋಹುದು. ಈ ಸಮಸ್ತ ಜಗತ್ಪ್ರಪಂಚವು ಶಿವಾತ್ಮಕವಾಗಿರುವಂಥದ್ದು. ಅದು ಪರಮೇಶ್ವರನ ಹೊರತಾಗಿ ಇಲ್ಲ. ನಾನೆ ಶಿವನೆಂಬ ಬುದ್ಧಿಯು ಉತ್ತಮವಾದ ಜ್ಞಾನವಯ್ಯ ಶಾಂತವೀರೇಶ್ವರಾ