Index   ವಚನ - 127    Search  
 
ಶರೀರವು ಆ ಪ್ರಾಣಲಿಂಗವ್ರತವನೆ ಚೈತನ್ಯವಾಗಿ ಉಳ್ಳುದು ಅದು ಕಾರಣ ಪ್ರಾಣಲಿಂಗ ವ್ರತವನೆ ಸ್ಥಾಪಿಸುತ್ತಿರ್ದನು. ಅದೆಂತೆಂದೊಡೆ: ಪ್ರಾಣಲಿಂಗ ವ್ರತವು ಲೋಪವಾಗುತ್ತಿರಲು ಪ್ರಾಣ ತ್ಯಾಗದ ಹೊರತು ಅನ್ಯ ಪ್ರಾಯಶ್ಚಿತ್ತವಿಲ್ಲ. ಅದು ಕಾರಣ ಸಾವಧಾನದಿಂದ ಶಿವಲಿಂಗವನು ಧರಿಸುವದೆಂದನೆಯ್ಯ ಶಾಂತವೀರೇಶ್ವರಾ