Index   ವಚನ - 135    Search  
 
ಲಿಂಗ ಮಸ್ತಕದಿಂದ ತೊಡಗಿ ಅಧಃಪೀಠಪರ್ಯಂತ ಸೀಳಿದೊಡೆ ಆ ಲಿಂಗವು ಪ್ರೇತಲಿಂಗದೋಪಾದಿಯಲ್ಲಿ ಕಳಾಹೀನವಾದುದು. ಅಂಥ ಲಿಂಗವನು ಧರಿಸಿದಾತನು ಪ್ರಾಣಂಗಳ ಬಿಡುವುದು, ಎನ್ನ ಭಕ್ತನ ಲೇಸಾದ ನಡೆಯು ಎಂದೀಶ್ವರನು ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ