Index   ವಚನ - 147    Search  
 
ಜ್ಞಾನರೂಪವಾದ ಪರತತ್ತ್ವಕಾರವಾದ ವಿಶ್ವವೆಂಬ ಹೆಸರಾಂತ ವಿಶ್ವಕ್ಕೆ ಕಾರಣವಾದ ತೊಲಗಿದ ಸಮಸ್ತ ಪಾಪವುಳ್ಳ ತೊಲಗಿದ ಅಷ್ಟ ತ್ರಿಶತ ಕಲೆಗಳುಳ್ಳ ವಿಕಲ್ಪರಹಿತವಾದ ಸದಾನಂದ ಪ್ರಕಾಶಾತ್ಮಕವಾಗಿ ವ್ಯಾಪಿಸುತಿರ್ದ ಕಲೆಯ ಸ್ವರೂಪವಾಗುಳ್ಳ ಪ್ರಮಾಣತೀತವಾದ ನಿರ್ದೇಶಿಸಬಾರದ ಜಗತ್ಪ್ರಪಂಚವನು ಮೀರಿ ವರ್ತಿಸುತ್ತಿರ್ದ ಕೇಡಿಲ್ಲದಿರ್ದ ಪರಾಪರ ಮೋಕ್ಷವನು ಬಯಸುತ್ತಿದ್ದ ಮೌನಿಗಳು ಉಪಾಸಿಸುವ ಪರಶಿವ ಶಬ್ದವಾಚ್ಯವಾದ ಪರಬ್ರಹ್ಮವೆ ಮಹಾಲಿಂಗವು ಎಂದು ಪ್ರಸಿದ್ಧವು. ಆ ಮಹಾಲಿಂಗವೆ ಸಮಸ್ತ ಪ್ರಾಣಿಗಳು ಒಳಗೆ ಮೂರು ಸ್ಥಾನವೆ ವಿಷಯವಾಗುಳ್ಳದ್ದು. ಆವುದಾನೊಂದು ಶಿವಾಗಮ ಪ್ರಸಿದ್ಧವಾದ ಪರಶಿವತತ್ತ್ವವನು ಉಪನಿಷತ್ತುಗಳು ಪರಬ್ರಹ್ಮವೆಂದು ಹೇಳುತ್ತಿವೆ, ಆ ಮಾಹಾಲಿಂಗವು ಸಮಸ್ತಾತ್ಮರ ಪೂರ್ವ ಹೃದಯದಲ್ಲಿ ಮಧ್ಯಹೃದಯದಲ್ಲಿ ಊರ್ಧ್ವ ಹೃದಯದಲ್ಲಿ ಎಲ್ಲಾ ಕಾಲದಲ್ಲಿ ಪ್ರಕಾಶಿಸುತ್ತಿರ್ಪುದು ಗುರೂಪದೇಶದಿಂದ ಸಾಕ್ಷಾತ್ಕರಿಸುವುದೆಂಬುದರ್ಥವಯ್ಯ ಶಾಂತವೀರೇಶ್ವರಾ