Index   ವಚನ - 155    Search  
 
ಶಿವಭಕ್ತಿಯಿಂದ ವಿಶೇಷವಾಗಿ ಭಾವಿಸುವ ಸ,ಮಸ್ತವಾದ ಮಹಾಲಕ್ಷ್ಮೀ ಮೊದಲಾಗುಳ್ಳ ಶಕ್ತಿದೇವತೆಗಳು ಶಿವಲಿಂಗವನು ಲಲಾಟದ ಊರ್ಧ್ವ ಭಾಗವಾದ ಶಿರಸ್ಸುಗಳಲ್ಲಿ ಆವಾಗಲು ಧರಿಸಿರುವರು, ನಾರಾಯಣನು ಉರಸ್ಥಲದಲ್ಲಿ ನೀಲದ ಲಿಂಗವನು ಧರಿಸಿ, ಬ್ರಹ್ಮನು ಮಸ್ತಕದಲ್ಲಿ ಸ್ಪಟಿಕದ ಲಿಂಗವನು ಧರಿಸಿ, ದೇವೆಂದ್ರನು ವಜ್ರದ ಲಿಂಗವನು ಧರಿಸಿ ತಮ್ಮ ತಮ್ಮ ಪದವಿಯನು ಪಡೆದರಯ್ಯ ಶಾಂತವೀರೇಶ್ವರಾ