ನಿಃಕಳಲಿಂಗದಲ್ಲಿ ಮೊದಲನೆಯ ಭಸ್ಮವು
ಗೋಪ್ಯವಾಗಿ ನಾಮ ರಹಿತವಾದುದು.
ಎರಡನೆಯ ಭಸ್ಮವು ಮಹಾಲಿಂಗದಲ್ಲಿ
ಚಿತ್ಯಕ್ತಿ ಸ್ವರೂಪವಾದುದು.
ಮೂರನೆಯ ಭಸ್ಮವು ಸದಾಶಿವತತ್ತ್ವದಲ್ಲಿ ಜ್ಞಾನಸ್ವರೂಪವಾದ
ವೃಷಭ ವಿಲಾಸವುಳ್ಳದ್ದು.
ನಾಲ್ಕನೆಯದು, ಭಕ್ತಾದಿಗಳಿಗೆ
ಧರಿಸಲ್ತಕ್ಕ ವಿಭೂತಿಯಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Niḥkaḷaliṅgadalli modalaneya bhasmavu
gōpyavāgi nāma rahitavādudu.
Eraḍaneya bhasmavu mahāliṅgadalli
cityakti svarūpavādudu.
Mūraneya bhasmavu sadāśivatattvadalli jñānasvarūpavāda
vr̥ṣabha vilāsavuḷḷaddu.
Nālkaneyadu, bhaktādigaḷige
dharisaltakka vibhūtiyayya
śāntavīrēśvarā