Index   ವಚನ - 170    Search  
 
ಇನ್ನು ವಿಭೂತಿಯ ಸ್ಥಾನವೆಂತೆಂದೊಡೆ: ಹಣೆ, ಕೊರಳು, ಕಿವಿಗಳು, ಚಕ್ಷುಷಿ, ನೇತ್ರಂಗಳು, ನಾಸಿಕ, ಮುಖ, ತೋಳ್ಗಳು, ಭುಜದ್ವಯ, ಸ್ತನದ್ವಯ, ಹೊಟ್ಟೆ, ಮಣಿಕಟ್ಟುಗಳು, ಹೃದಯಬದಿಗಳು, ಹೊಕ್ಕಳು, ಮೇಢ್ರ ಸ್ಥಾನ, ಬೆನ್ನು, ತೊಡೆಗಳು, ಜಾನು, ಜಂಘೆ, ಗುದ, ಪಾದಂಗಳು ಮೂವತ್ತೆರಡು ಸಂಧಿಗಳು, ಕ್ರಮ ತಪ್ಪದೆ ಶ್ರೀವಿಭೂತಿಯ ಧರಿಸುವದಯ್ಯ ಶಾಂತವೀರೇಶ್ವರಾ