Index   ವಚನ - 171    Search  
 
ವಿಭೂತಿಗೋಸ್ಕರ ಪ್ರಮಾದವ ಮಾಡಲಾಗದು, ಸಾವಧಾನದಿಂದ ಧರಿಸಬೇಕು. ಆ ವಿಭೂತಿಯ ಉತ್ಕರ್ಷವೆಂತೆಂದೊಡೆ ಯಜ್ಞ ಅಗ್ನಿ ಹೊರತಾಗಿ ಹೇಗಿರುವುದೋ ಹಾಂಗೆ ಶಿವಪೂಜೆಯು ಅನೇಕ ಸಾಧನಗಳಿದ್ದರೂ ವಿಭೂತಿಯು ಇಲ್ಲದೆ ಒಪ್ಪದಯ್ಯ ಶಾಂತವೀರೇಶ್ವರಾ