Index   ವಚನ - 183    Search  
 
ಎಡಗೈಯಲಿ ವಿಭೂತಿಯನು ಇರಿಸಿಕೊಂಡು, ಬಲಗೈಯ್ಯಿಂದೆ ಮುಚ್ಚಿಕೊಂಡು ‘ಓಂ ಅಗ್ನಿರಿತಿ ಭಸ್ಮವಾಯುರಿತಿ ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ವ್ಯೋಮೇತಿ ಭಸ್ಮ ಸರ್ವಂ ವಾಯಿದಂ ಭಸ್ಮ ಮನ ಏತಾನಿ ಚಕ್ಷೂಂ ಹಿ ಭಸ್ಮನಿತಿ’ ಎಂಬಥರ್ವ ಶಿರೋಮಂತ್ರದಿಂದೆ ಮುಟ್ಟುತ, ಏಳುಬಾರಿ ಮಂತ್ರಿಸಿ, ಮೊದಲು ಹೇಳಿದ ಹದಿನೈದು ಸ್ಥಾನಂಗಳಲ್ಲಿ ಜಲದೊಡನೆ ಕೂಡಿದ ಭಸ್ಮದಿಂದೆ ತ್ರಿಪುಂಡ್ರವನು ಆವಾತನು ಧರಿಸುವನು, ಆತನು ರಾಗದ್ವೇಷ ರಹಿತನಾಗಿರ್ದು ಮಂಗಲವನು ಮಾಡುತ್ತಿದ್ದನು. “ಈಶಾನಾಂ ಶಿವ ಏಕೋ| ಧೈಯಃ ಶಿವಂಕರಃ ಸರ್ವಮನ್ವರಿತ್ಯಜ್ಯ ಸಮಾಪ್ತಾ ಧರ್ಮಶಿ ಚಾ” ಎಂದು ಶ್ರುತಿ ಪ್ರಸಿದ್ಧವಾದ ಶಿವನನು ಎಯ್ದುತ್ತಿರ್ದಪನು, ಸಂದೇಹವಿಲ್ಲವಯ್ಯ ಶಾಂತವೀರೇಶ್ವರಾ