Index   ವಚನ - 190    Search  
 
ಸಮಸ್ತ ಜಗತ್ತನ್ನು ಪಾವನವ ಮಾಡುವ ನಿತ್ಯ ಮಂಗಲವಾದ ತ್ರಿಪುಂಡ್ರ ಸ್ವರೂಪವಾದ ಆ ಅಷ್ಟಸಿದ್ಧಿಗಳ ಪ್ರಾಪ್ತಿಗೆ ಕಾರಣವಾದಂಥ ಭಸ್ಮಕ್ಕೆ ನಮಸ್ಕಾರವೆಂದು ಆ ಭಸ್ಮವನರ್ಚಿಸಿ ಆ ಮಂತ್ರದಿಂದ ಭಸ್ಮಕ್ಕೆ ನಮಸ್ಕರಿಸುವದಯ್ಯ ಶಾಂತವೀರೇಶ್ವರಾ