Index   ವಚನ - 193    Search  
 
ಬಳಿಕ ಗೃಹಸ್ಥರು ಸ್ತ್ರೀಯರುಗಳು ತ್ರಿಸಂಧಿಯಲ್ಲಿಯೂ ಜಲಮಿಶ್ರಿತವಾದ ವಿಭೂತಿಯನೆ ಧರಿಸಬೇಕು, ಯತಿಗಳೆಲ್ಲಾ ಕಾಲದಲ್ಲಿಯೂ ಜಲಮಿಶ್ರವಿಲ್ಲದ ವಿಭೂತಿಯಂ ಧರಿಸಬೇಕು. ವಾನಪ್ರಸ್ಥರು ಕನ್ನಿಕೆಯರು ದೀಕ್ಷಾಹೀನ ಮನುಷ್ಯರು ಮಧ್ಯಾಹ್ನ ಪರಿಯಂತರಂ ಜಲಮಿಶ್ರಿತವಾದ ಕೇವಲ ವಿಭೂತಿಯನೆ ಧರಿಸಬೇಕು ಶಾಂತವೀರೇಶ್ವರಾ