Index   ವಚನ - 195    Search  
 
ಸಮಯಾಚಾರ ಮೀರಿದವನಾಗಿರಲಿ ದುರಾಚಾರ ತತ್ಪರನಾದರಾಗಲಿ ಶಿವನಿಲ್ಲವೆಂಬ ನಾಸ್ತಿಕನಾದರಾಗಲಿ ಎತ್ತಲಾನು ಭಸ್ಮತ್ತಿಪುಂಡ್ರವ ಧರಿಸಿದವನು ಸಮಸ್ತ ಪಾಪಂಗಳಿಂದೆ ಮುಕ್ತನಾಗುವನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರರಿಂದ ಮಹಾಜ್ಞಾನ ಭಸ್ಮವನು ಸತ್ಕ್ರಿಯಾ ಮುಖದಿ ಧರಿಸಿದಂತ ಲಿಂಗಕ್ರಿಯಾ ಸಂಪನ್ನಂಗೆ ಶಿವಜ್ಞಾನ ಚಕ್ಷುವಿನಿಂದ ಹುಟ್ಟಿದ ರುದ್ರಾಕ್ಷೆಯ ಧಾರಣೆಯಬಹುದು. ಮುಂದೆ “ರುದ್ರಾಕ್ಷೆ ಧಾರಣಸ್ಥಲ”