ಪರಮೇಶ್ವರನ ಸೂರ್ಯ ಸೋಮಾಗ್ನಿ ನೇತ್ರಗಳಿಂದ ಹುಟ್ಟಿದ
ರುದ್ರಾಕ್ಷಿಯ ಪ್ರಕಾಶವದೆಂತೆನೆ,
ಬಲದ ಕಡೆಯ ಸೂರ್ಯ ನೇತ್ರದಿಂದ ಹುಟ್ಟಿದ
ಕಪಿಲವರ್ಣದ ರುದ್ರಾಕ್ಷಿಗಳು ಹನ್ನೆರಡು ಪ್ರಕಾರ;
ಎಡಗಡೆಯ ಸೋಮನಯನದಿಂದ ಹುಟ್ಟಿದ
ಬಿಳಿಯ ವರ್ಣದ ರುದ್ರಾಕ್ಷಿಗಳು ಹದಿನಾರು ಪ್ರಕಾರ;
ನೊಸಲು ಅಗ್ನಿಯ ನಯನದಿಂದ ಹುಟ್ಟಿದ
ಕಪ್ಪುವರ್ಣದ ರುದ್ರಾಕ್ಷಿಗಳು ಹತ್ತು ಬೇದ.
ನಂತರ ಆ ರುದ್ರಾಕ್ಷಿಗಳು ಮೂವತ್ತೆಂಟು
ಭೇದದಿಂದ ಅದವಯ್ಯ ಶಾಂತವೀರೇಶ್ವರಾ