ಎಲೈ ಶಿವನೆ, ತಮ್ಮ ನಾಮೋಚ್ಛಾರಣ
ಧಾರಣ ಮಾತ್ರದಿಂದ ಉತ್ತರೋತ್ತರಮಾದಧಿಕ ಪುಣ್ಯಂಗನೀವುದರಿಂದ
ಲೋಕೋಪಕಾರಮಾಗಿ ಜನಿಸಿದ ರುದ್ರಾಕ್ಷಿಗಳಲ್ಲಿ
ಸರಂಗೆಯ್ವುದಕ್ಕೆ ಮಣಿಗಳುನ್ನತ ಸ್ಥಾನಮೆ ಮುಖಂಗಳು
ನಿಮ್ನ ಸ್ಥಾನವೆ ಪುಷ್ಪಗಳು
ಮರುಗಣನೆಯನರಿಯುವ ರೇಖೆಗಳೆ
ಮುಖ್ಯವಾದ ಮಣಿಗಳ ಮೂಲವೆ ಬ್ರಹ್ಮನು,
ನಾಳವೆ ವಿಷ್ಣು, ಮುಖವೆ ರುದ್ರನು,
ಕೇಸರಂಗಳೆ ಸಕಲದೇವತೆಗಳು. ಅದರ
ಸಲ್ಲಕ್ಷಣಂಗಳ ಪರೀಕ್ಷಿಸಿದ ಬಳಿಕ
ತಾನು ಸ್ನಾನಾದಿಗಳಿಂ ಶುಚಿಯಾಗಿ ಕುಳ್ಳಿರ್ದು
ಮರಳಿ ಸಮಸ್ತ ಪಾಪ ಕ್ಷಯಾರ್ಥಮಾಗಿ
ಧರಿಸುತ್ತೇನೆಂದು ಸಂಕಲ್ಪಸಿ ಬಳಿಕ ಶಿಖಿಗೆ
ಏಕಮುಖದ ಮಣಿಯೊಂದ[ನು]
ಪ್ರವೀಣನಾದಾತನು ಧರಿಸುವದು.
ಎರಡು ಮೂರು ಹನ್ನೆರಡು
ಮುಖಗಳುಳ್ಳ ಮೂರು ರುದ್ರಾಕ್ಷೆಗಳನು
ಬ್ರಹ್ಮಸ್ಥಾನದಲ್ಲಿ ಧರಿಸುವುದು.
ಹನ್ನೊಂದು ಮುಖಗಳುಳ್ಳ ಮೂವತ್ತಾರು ರುದ್ರಾಕ್ಷೆಗಳನು
ಮಸ್ತಕದಲ್ಲಿ ಆವಾಗವು ಧರಿಸುವುದು.
ಹತ್ತೇಳು ಐದು ಮುಖಂಗಳುಳ್ಳ ಅರಾರು ರುದ್ರಾಕ್ಷೆಗಳನು
ಎರಡು ಕಿವಿಯಲ್ಲಿ ಧರಿಸುವುದ.
ಒಂದೊಂದು ರುದ್ರಾಕ್ಷೆಯನಾದರೂ
ಕರ್ಣದ್ವಯದಲ್ಲಿ ಧರಿಸುವುದಯ್ಯ ಶಾಂತವೀರೇಶ್ವರಾ