Index   ವಚನ - 203    Search  
 
ಹದಿನಾಲ್ಕು ಮುಖವುಳ್ಳ ನೂರೆಂಟು ರುದ್ರಾಕ್ಷೆಗಳನು ಯಜ್ಞೋಪವೀತವಾಗಿ ಎಲ್ಲಾ ಕಾಲದಲ್ಲಿ ಶಿವಲಿಂಗ ಪೂಜಕನಾದ ಭಕ್ತನು ಧರಿಸುವುದು. ಇದರ ತಾತ್ಪರ್ಯ: ಶುದ್ಧ ಮಿಶ್ರ ಸಂಕೀರ್ಣ ಭುವನಾಧೀಶ್ವರನಾದ ಪರಶಿವ ಅಷ್ಟ ವಿದ್ಯೇಶ್ವರರು ಶತರುದ್ರರು ಇವರ ಸಂಖ್ಯೆಯಿಂದಲಾದ ಯಜ್ಞೋಪವೀತ ಧಾರಣದಿಂದೆ ‘ಭವನಾಧ್ವ’ ಶುದ್ಧಿ, ವರ್ಣಸಂಖ್ಯೆಯುಳ್ಳ ಉರೋಮಾಲೆಯಿಂದೆ ‘ವರ್ಣಾಧ್ವ’ಶುದ್ಧಿ. ಪದಸಂಖ್ಯೆಯುಳ್ಳ ಮಣಿಬಂಧ ಬಾಹುಕಂಠಮಾಲೆಗಳಿಂದೆ ‘ಪದಾಧ್ವ’ ಶುದ್ಧಿ, ಷಡಂಗ ಪಂಚಬ್ರಹ್ಮ ಪ್ರಣವ ಮಂತ್ರ ಸಂಖ್ಯೆಯುಳ್ಳ ಕರ್ಣಾಭರಣದಿಂದೆ ‘ಮಂತ್ರಾಧ್ವ’ ಶುದ್ಧಿ. ಶಿವಶಕ್ತ್ಯತ್ಮಕವಾದ ಕರ್ಣಭರಣವಾದರು ಆಗಲಿ ತತ್ತ್ವ ಶಂಖ್ಯೆಯುಳ್ಳ ಮಸ್ತಕ ಮಾಲೆಯಿಂದೆ ‘ತತ್ತ್ವಾದ್ವ’ ಶುದ್ಧಿ ಅಷ್ಟ ತ್ರಿಶತ್ಕಲಾ ಪರಿಪೂರ್ಣರಾದ ಚಂದ್ರ ಸೂರ್ಯಗ್ನಿಗಳ ಸಂಖ್ಯೆಯುಳ್ಳ ಶಿರೋಮಾಲೆಯ ಧರಿಸುವುದರಿಂದ ‘ಕಲಾಧ್ವ’ ಶುದ್ಧಿ. ಈ ಷಡದ್ವಗಳಿಗೆ ಕಾರಣವಾದ ಶಿವತತ್ತ್ವ ಸಂಖ್ಯೆಯುಳ್ಳ ಒಂದು ರುದ್ರಾಕ್ಷೆಯ ಧರಿಸಿದಾತನು ಪರಶಿವತತ್ತ್ವ ಸ್ವರೂಪನೆಂಬುದರ್ಥವಯ್ಯ ಶಾಂತವೀರೇಶ್ವರಾ