ಆ ರುದ್ರಾಕ್ಷೆಯ ತೊಡುವ ಮೊದಲು
ಓಂಕಾರದ ಅಯ್ದು ಮುಖಂಗಳು
ಪಂಚಾಕ್ಷರಗಳೆಂದು ಅರಿವರು,
ಆ ರುದ್ರಾಕ್ಷೆಯ ನಾಳವು
ಭಕ್ತರ ಹೃದಯದಲ್ಲಿ ನಾಳವು,
ಆ ರುದ್ರಕ್ಷೆಯ ನಾಳದ ನೂಲು
ಜ್ಞಾನಸೂತ್ರವಾಗಿಹದಯ್ಯ
ಶಾಂತವೀರೇಶ್ವರಾ
ಸೂತ್ರ: ಈ ಪ್ರಕಾರದಿಂದ ಲಿಂಗಧಾರಣೆಯಾದ ವಿಭೂತಿ ಧಾರಕನಾದ ಪಂಚಾಕ್ಷರಿ ಮಂತ್ರ ನಿತ್ಯ ಲಿಂಗಾರ್ಚಕನಾದ ಲಿಂಗ ಸಂಪತ್ತಿಯುಳ್ಳವಂಗೆ ಪ್ರಮಾಣದೊಡನೆ ಕೂಡಿದ ಪಂಚಾಕ್ಷರಿ ಮಂತ್ರವು ಜಪವು ಅವಶ್ಯಕವಾದುದರಿಂದ ಮುಂದೆ ಪಂಚಾಕ್ಷರಿ ಸ್ಥಲವಾದುದು.