ಬಳಿಕ,
ಪರಶಿವನು ವಾಚ್ಯನು, ಪಂಚಾಕ್ಷಾರಿ ಮಂತ್ರವೆ
ವಾಚಕವೆಂದೆಂತೆಂದೊಡೆ ಪರಶಿವ ಪರಬ್ರಹ್ಮ ಪರಮಾತ್ಮನೆಂಬ
ಪರ್ಯಾಯ ನಾಮವುಳ್ಳ ಮಹಾಲಿಂಗವೆ ಸಕಲ ಲೋಕಂಗಳ
ಲಯ ಗಮನಕ್ಕೆ ಕಾರಣವು.
ಪಂಚಾಕ್ಷರ ಮಂತ್ರ ವಾಚ್ಯನಾದ
ಪರಮೇಶ್ವರನು ವಾಚಕ ಮಂತ್ರವಾದ
ಈ ಪಂಚಾಕ್ಷರವೆ ಸಮಸ್ತ ಮಂತ್ರಗಳಿಗೆ ಮುಖ್ಯ ಕಾರಣ,
ವೇದಂಗಳಲ್ಲಿ ‘ಓಂಕಾರ’ವೆ ಮೂಲ ಮಂತ್ರವು,
ಆಗಮಂಗಳಲ್ಲಿ ‘ಹಕಾರ’ವೆ ಮೂಲ ಮಂತ್ರವು,
ತದುಭಯ ರೂಪವಾದ ಷಟ್ ಸ್ಥಲಂಗಳಲ್ಲಿ
ಅಂಗಲಿಂಗ ರೂಪವಾದ ಜೀವೇಶ್ವರೈಕ್ಯ ಪ್ರತಿಪಾದಕನಾದ
‘ಸೋಹಂ’ ಎಂಬುದೆ ಮೂಲ ಮಂತ್ರ.
‘ಓಂಕಾರವೆ ಶರೀರ, ಹಾಕರವೆ ಚೈತನ್ಯವಾಗುಳ್ಳ
ಲಿಂಗಾಧಾರ ರೂಪವಾದ ಶಿವ
ಜೀವರಿಗೆ ಈ ಪಂಚಾಕ್ಷರ ಬೀಜವೆಂದು
ಶ್ರುತಿ ಗುರುಸ್ವಾನುಭವಗಳಿಂದ ನಿಶ್ಷಯಿಸಲಾಗಿದೆಯಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Baḷika,
paraśivanu vācyanu, pan̄cākṣāri mantrave
vācakavendentendoḍe paraśiva parabrahma paramātmanemba
paryāya nāmavuḷḷa mahāliṅgave sakala lōkaṅgaḷa
laya gamanakke kāraṇavu.
Pan̄cākṣara mantra vācyanāda
paramēśvaranu vācaka mantravāda
ī pan̄cākṣarave samasta mantragaḷige mukhya kāraṇa,
vēdaṅgaḷalli ‘ōṅkāra’ve mūla mantravu,
āgamaṅgaḷalli ‘hakāra’ve mūla mantravu,
tadubhaya rūpavāda ṣaṭ sthalaṅgaḷalliAṅgaliṅga rūpavāda jīvēśvaraikya pratipādakanāda
‘sōhaṁ’ embude mūla mantra.
‘Ōṅkārave śarīra, hākarave caitan'yavāguḷḷa
liṅgādhāra rūpavāda śiva
jīvarige ī pan̄cākṣara bījavendu
śruti gurusvānubhavagaḷinda niśṣayisalāgideyayya
śāntavīrēśvarā