Index   ವಚನ - 221    Search  
 
ಬಳಿಕಾ ಪಂಚಾಕ್ಷರ ಮಧ್ಯಸ್ಥನಾದ ಶಿವ ಶಬ್ದವಿಗ್ರಹವೆಂತೆಂದೊಡೆ, ಸಚ್ಚಿದಾನಂದವೆ ಸ್ವರೂಪವಾಗುಳ್ಳ, ಸ್ವತಂತ್ರಶೀಲನಾದ ಪರಮೇಶ್ವರನು ಮೊದಲೆ ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯದ ವಿಯೋಗದಿಂದ ಅನಾದಿಯಿಂದ ನಿರ್ಮಲತ್ವ ಉಳ್ಳಾತನಾದ ಕಾರಣ ಶಿವನೆಂದು ಹೇಳುವರಯ್ಯ ಶಾಂತವೀರೇಶ್ವರಾ