Index   ವಚನ - 224    Search  
 
“ನಮಃ ಶಿವಾಯ” ಎಂಬೀ ಪಂಚಾಕ್ಷರಗಳೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಚರಲಿಂಗ ಪ್ರಸಾದಲಿಂಗಂಗಳಿಗೆ ಭೀಜಾಕ್ಷರ; ಓಂಕಾರವೆ ಮಹಾಲಿಂಗಕ್ಕೆ ಬೀಜಾಕ್ಷರ. ಇಂತುವೀ ಬೀಜಾಕ್ಷರ ರೂಪವಾದ ಪ್ರಣವ ಪಂಚಾಕ್ಷರವೆ ಷಡುಸ್ಥಲಕ್ಕೆ ಬೀಜವೆಂಬುದರ್ಥವಯ್ಯ ಶಾಂತವೀರೇಶ್ವರಾ