Index   ವಚನ - 225    Search  
 
‘ನ’ ಕಾರವೆ ತಾರಕ ಸ್ವರೂಪು ‘ಮ’ ಕಾರವೆ ದಂಡಕಾಕೃತಿಯು ‘ಶಿ’ ಕಾರವೆ ಕುಂಡಲಾಕೃತಿಯು ‘ವಾ’ ಕಾರವೆ ಚಂದ್ರಾಕೃತಿಯು ‘ಯ’ ಕಾರವೆ ದರ್ಪಣಾಕೃತಿಯು ‘ಓಂ’ ಕಾರವೆ ಜ್ಯೋತಿರಾಕೃತಿಯು ಎಂದು ಶಿವಾಗಮ ವಾಕ್ಯವುಂಟಾಗಿ ಪಂಚಾಕ್ಷ ಕಲ್ಪವೃಕ್ಷಕ್ಕೆ ಬೀಜಭೂತವಾಗಿರ್ದ ಓಂಕಾರ ಮಂತ್ರವ ಪೇಳುವೆನು. ಮಹಾಮಂತ್ರವಾಗಿರ್ದ ಈ ಪಂಚಾಕ್ಷರ ಮಂತ್ರಕ್ಕೆ ಮೊದಲಾದ ಓಂಕಾರದಿಂದೆ ಚಿದಾನಂದ ಸ್ವರೂಪನಾದ ಕೇವಲ ಪರಶಿವನೆ ಪ್ರಕಾಶಿಸುವನಯ್ಯ ಕೇವಲ ಪರಶಿವನೆ ಪ್ರಕಾಶಿಸುವನಯ್ಯ ಶಾಂತವೀರೇಶ್ವರಾ