Index   ವಚನ - 226    Search  
 
ಒಂದಕ್ಷರವಾಗಿರ್ದ ‘ಓಂ’ಕಾರದಿಂದ ತೊಲಗಿದ ಜಗತ್ಪ್ರಪಂಚವುಳ್ಳ ಶಿವಾಗಮ ಪ್ರಸಿದ್ಧವಾದ ಶಿವನೆಂಬ ಹೆಸರುಳ್ಳ ಅದ್ವಿತೀಯ ಪರಬ್ರಹ್ಮ ‘ಏಕಮೇವಾದ್ವಿತೀಯಂ ಬ್ರಹ್ಮ’ವೆಂದು ಶ್ರುತಿ ಶಿರಸ್ಸಿದ್ಧವಾದ ಪರಬ್ರಹ್ಮ ವಾಚ್ಯವಾದ ಪರಮ ತೃಪ್ತಿರೂಪವಾದ ಮಹಾಲಿಂಗವು ಪ್ರಕಾಶಿಸುತ್ತಿರ್ಪದಯ್ಯ ಶಾಂತವೀರೇಶ್ವರಾ