ಬಳಿಕ ವೇದಗಮ ಪ್ರಸಿದ್ಧವಾದ
ಲಿಂಗಾಂಗ ಷಟ್ಸ್ಥಲ ಯೋಗಕ್ಕೆ
ಕಾರಣವಾದ ‘ಓಂಕಾರೋತ್ಪತ್ತಿಯನು’
ಅಜಪೆ ಗಾಯಿತ್ತಿ ಮಂತ್ರಯೋಗ ಪೂರ್ವಕವಾಗಿ ಪೇಳುವೆನು.
ಪರಮಾತ್ಮ ಮಂತ್ರವು ಸೋಹಮೆಂಬ ಸ್ವರೂಪ ಉಳ್ಳದ್ದಾಗಿ
ಗುರೂಪದೇಶ ಸ್ವಾನುಭವಗಳಿಂದರಿಯಲು ಯೋಗ್ಯವು.
ಸೋಹಂ ಎಂಬ ಹಕಾರ ಸ ಕಾರಂಗಳಿಗೆ
ಕೇವಲ ಕುಂಭಕದಿಂದ ಲೋಪವಾಗಲಾಗಿ
“ಸದೃಶ್ಯಂ ತ್ರೀಷು ಲಿಂಗೇಷು| ಸರ್ವಾಸು ಚಿ ವಿಭಕ್ತಂ|
ಯನ್ನವ್ಯಾವತಿ ತದವ್ಯಮಂ||”
ಎಂಬ ವ್ಯಾಕರಣವಾಕ್ಯ ಉಂಟಾಗಿ
ಅವ್ಯಯವಾಗಿರ್ದ ‘ಓಂ’ ಎಂಬ ಏಕಾಕ್ಷರ
ಮಂತ್ರವು ಹುಟ್ಟುವುದಯ್ಯ
ಶಾಂತವೀರೇಶ್ವರಾ