Index   ವಚನ - 230    Search  
 
ನಿಃಕಲವಾದ ಶಿವನು ‘ಸತ್ಯಜ್ಞಾನಮನಂತ ಬ್ರಹ್ಮ’ ಎಂಬ ಶ್ರುತಿಯಿಂದೆ ಸಚ್ಚಿದಾನಂದ ನಿತ್ಯ ಪರಿಪೂರ್ಣ ಸ್ವರೂಪ ಉಳ್ಳಾತನು. ಸಕಲನಾದ ಶಿವನು ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಶ್ರುತಿಯಿಂದೆ ವಿಶ್ವರೂಪ ಉಳ್ಳಾತನು; ಸಕಲ ನಿಃಕಲ ಸ್ವರೂಪವುಳ್ಳ ಶಿವನು ಷಡಕ್ಷರ ಸ್ವರೂಪವಾದ ಪ್ರಣವ ಪಂಚಾಕ್ಷರ ಮಂತ್ರಗಳಿಂದ ವರ್ತಿಸುತ್ತಿರುವನಯ್ಯ ಶಾಂತವೀರೇಶ್ವರಾ