Index   ವಚನ - 231    Search  
 
ಪಂಚಾಕ್ಷರಾತ್ಮಕವಾದ ಈ ಮಹಾಲಿಂಗಕ್ಕೆ ಮೂಲವೆಂದು, ವಿದ್ಯೆ ಎಂದು, ಶಿವನೆಂದು, ಶಿವಸ್ತೋತ್ರವೆಂದು ಹಾಂಗೆಯೇ ‘ಪಂಚಾಕ್ಷರ’ವೆಂದು ಈ ಪರ್ಯಾಯ ನಾಮಂಗಳು. ನಮಃ ಶಿವಾಯ ಎಂಬುದೆ ಗಾಯತ್ರಿ ಮಂತ್ರವು, ಅದೇ ಷಡಕ್ಷರಿ ಮಂತ್ರವು. ಪಂಚಾಕ್ಷರವೆ ಸಾವಿತ್ರಿಯಹುದು. ಸಾಕ್ಷಿ: ‘ಓಂ ನಮಃ ಶಿವಾಯ ಯೇತಿ ಗಾಯತ್ರ್ಯಾತ್ಮಕಕ್ಷರಂ ಸಂಭವೇತ್ ಸ್ಸಾತ್’ ಎಂದು ಹೇಳಿರುವುದಯ್ಯ ಶಾಂತವೀರೇಶ್ವರಾ