Index   ವಚನ - 239    Search  
 
ಬಳಿಕೀ ಮಾನಸಜಪವು ಸಂಸಾರ ವಿಮೋಚಕವೆಂದು ಹೇಳುವರಯ್ಯ, ಭಯಂಕರವಾದ ಸಂಸಾರವನು ನಾಶ ಮಾಡುವುದರಿಂದ ಶ್ರೇಷ್ಠವಯ್ಯ. ಈ ವಾಚಕವಾಗಿ ಜಪ ವಿಷಯವಾಗಿ ನಿಯಮಿತ ವಿಧಿಯ ಭಾವವನು ಮೀರದೆ, ಕ್ರಮವನು ಮೀರದೆ ‘ನಮಃ ಶಿವಾಯ’ ಎಂಬೀ ಪಂಚಾಕ್ಷರ ಮಂತ್ರವನು ಮಲ ಮಾಯಾದಿ ಪಾಶಂಗಳ ಬಿಡುಗಡೆಗೆ ಜಪಿಸುವುದಯ್ಯ ಶಾಂತವೀರೇಶ್ವರಾ