Index   ವಚನ - 243    Search  
 
‘ನ’ ಕಾರವೆ ಋಗ್ವೇದವಹುದು, ‘ಮ’ ಕಾರವು ಯಜುರ್ವೇದವಹುದು, ‘ಶಿ’ ಕಾರವು ಸಾಮವೇದವು, ‘ವಾ’ ಕಾರವು ಅಥರ್ವಣ ವೇದವು, ಹಾಂಗೆ ‘ಯ’ ಕಾರವು ಇತಿಹಾಸವಹುದು. ಈ ಪಂಚಾಕ್ಷರಿ ಮಂತ್ರವು ಸಕಲ ಶಾಸ್ತ್ರ ಸ್ವರೂಪ ಅಹುದಯ್ಯ ಶಾಂತವೀರೇಶ್ವರಾ